Fact India

Fact India
Fact India: ನಕಲಿ ಸುದ್ದಿ ಹಾವಳಿಯ ನಡುವೆ ಕನ್ನಡದ ಪ್ರಥಮ ಫ್ಯಾಕ್ಟ್-ಚೆಕ್ ವೆಬ್ ತಾಣ |

Fake-buster ಫ್ಯಾಕ್ಟ್ ಇಂಡಿಯಾ | ಸುದ್ದಿಯ ನಿಜ ರೂಪ


 
ಎಲ್ಲ ಕನ್ನಡಿಗರಿಗೆ ನಮಸ್ಕಾರ.

ಇಂಟರ್ನೆಟ್ ಕ್ರಾಂತಿಯಾಗುತ್ತಿದ್ದಂತೆಯೇ, ದಿನಕ್ಕೊಂದು ಎಂಬಂತೆ ಹುಟ್ಟಿಕೊಳ್ಳುವ ಜಾಲತಾಣಗಳು. ಇವುಗಳ ಮಧ್ಯೆ, ಉತ್ಪ್ರೇಕ್ಷೆಯೊಂದಿಗೆ, ಸುದ್ದಿಗೆ ತಪ್ಪುಗಳನ್ನೂ ಸೇರಿಸಿಕೊಂಡು, ಇದುವೇ ಸುದ್ದಿ ಎಂದು ನಮ್ಮ ಮುಂದಿಡುವ, ಈಗಾಗಲೇ ವಿಶ್ವಾಸಾರ್ಹ ಎನಿಸಿಕೊಂಡಿರುವ ಮತ್ತಷ್ಟು ಪೋರ್ಟಲ್ ಗಳು - ಇವುಗಳ ಮಧ್ಯೆ ನಿಜವಾದ ಸುದ್ದಿ ಕಳೆದು ಹೋಗುತ್ತಿದೆ.

ಇದೇ ಕಾರಣಕ್ಕಾಗಿ, ಸುದ್ದಿಯ ಸತ್ಯಾಂಶವನ್ನು ನಿಮ್ಮ ಮುಂದಿಡುವುದಕ್ಕಾಗಿ ಈ ಜಾಲತಾಣವು ಹುಟ್ಟಿಕೊಂಡಿದೆ. ಉತ್ಸಾಹಿ ಪತ್ರಕರ್ತರ ತಂಡವು ಇಲ್ಲಿ ನಿಖರ ಸುದ್ದಿಯನ್ನಷ್ಟೇ ಹುಡುಕಿ ನಿಮ್ಮ ಮುಂದಿಡುತ್ತದೆ. ಏನೇನೋ ಎಡಿಟ್ ಮಾಡಿದ ಚಿತ್ರಗಳು, ವಿಡಿಯೊಗಳು - ಇವುಗಳು ವೈರಲ್ ಆಗುವ ಬಗೆ ಜೊತೆಗೆ, ಈ ತಿರುಚಿದ ಸತ್ಯಗಳ ಒಳ ಸತ್ಯವೇನು ಎಂಬುದನ್ನೆಲ್ಲ ನಿಮ್ಮ ಮುಂದಿಡುತ್ತೇವೆ.

ಬನ್ನಿ, ನಮ್ಮೊಂದಿಗೆ ಸೇರಿಕೊಳ್ಳಿ. ಸತ್ಯ ಸುದ್ದಿಯೊಂದಿಗೆ ಸ್ವಸ್ಥ ಸಮಾಜ ಕಟ್ಟೋಣ.

ಧನ್ಯವಾದಗಳೊಂದಿಗೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು