ನವದೆಹಲಿಯ ರಾಜಪಥದಲ್ಲಿ ಭಾರತದ ಗಣರಾಜ್ಯೋತ್ಸವ ವೈಭವ
ಲೇಖಕರ ಬಗ್ಗೆ: ಪಾಕಿಸ್ತಾನಿ ಮೂಲದ ಖಾಲಿದ್ ಉಮರ್ ಅವರು ಇಂಗ್ಲೆಂಡ್‌ನಲ್ಲಿ ಬ್ಯಾರಿಸ್ಟರ್ ಆಗಿದ್ದಾರೆ ಮತ್ತು ತಮ್ಮನ್ನು ತಾವು ಜಾತ್ಯತೀತ ಮಾನವತಾವಾದಿ ಅಂತ ಕರೆದುಕೊಂಡಿದ್ದಾರೆ. ಅವರು ಅಭಿವ್ಯಕ್ತಿ ಸ್ವಾತಂತ್ರ್ಯವು ಸಾರ್ವತ್ರಿಕ ಹಕ್ಕು ಎಂಬುದನ್ನು ಪ್ರತಿಪಾದಿಸುತ್ತಿದ್ದಾರೆ. ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಭಾರತೀಯರೆಲ್ಲರೂ ಯೋಚಿಸುವಂತೆ ಮಾಡಿದ ಪೋಸ್ಟ್ ಒಂದನ್ನು ಪ್ರಕಟಿಸಿದ್ದಾರೆ.
ಭಾರತವು ಜನವರಿ 26ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. 1950ರಲ್ಲಿ ಸಂವಿಧಾನವು ಅಸ್ತಿತ್ವಕ್ಕೆ ಬಂದಿರುವುದನ್ನು ನೆನಪಿಸಿಕೊಳ್ಳಲೋಸುಗ ಈ ದಿನವನ್ನು ಭಾರತವು ಆಚರಿಸುತ್ತಿದೆ. ನನ್ನ ಮಟ್ಟಿಗೆ ಹೇಳುವುದಾದರೆ, ಜಗತ್ತಿನ ಯಾವುದೇ ಪ್ರದೇಶದಲ್ಲಿ ಶಾಂತಿಯುತವಾದ, ಬಹುತ್ವದ, ಅಹಿಂಸಾ ಸಮಾಜವನ್ನು ಕಟ್ಟುವಲ್ಲಿ ಇಸ್ಲಾಮಿಕ್ ಸಿದ್ಧಾಂತವು ವಿಫಲವಾಗಿದೆ ಎಂಬುದನ್ನು ನೆನಪಿಸುವ ದಿನ ಇದು. ಮತ್ತು ಈ ವೈಫಲ್ಯದ ಕಾರಣಗಳು ಅದರ ತತ್ವ-ಸಿದ್ಧಾಂತಗಳೊಳಗೇ ಹಾಸುಹೊಕ್ಕಾಗಿವೆ.ಖಾಲಿದ್ ಉಮರ್
ಭಾರತ ವಿಭಜನೆ
'ನಾವು ನಮ್ಮ ನಂಬಿಕೆಯ ಆಧಾರದಲ್ಲಿ ಜೀವನ ನಡೆಸಲು ಸಾಧ್ಯವಾಗುವಂತೆ ಪ್ರತ್ಯೇಕ ರಾಷ್ಟ್ರ ನಮಗೆ ಬೇಕು' ಎಂದು ಮುಸಲ್ಮಾನರು ಬೇಡಿಕೆ ಮುಂದಿಟ್ಟ ಕಾರಣದಿಂದಾಗಿ ಭಾರತವನ್ನು ವಿಭಜಿಸಲಾಯಿತು. ಸಾಂಸ್ಕೃತಿಕವಾಗಿ ಮತ್ತು ವಂಶಪಾರಂಪರ್ಯವಾಗಿ ಸಾವಿರಾರು ವರ್ಷಗಳಿಂದ ಒಟ್ಟಾಗಿ ಜೀವಿಸಿದ್ದ ಜನರು, ತಮ್ಮ ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿರುವುದು ಆಧುನಿಕ ಇತಿಹಾಸದಲ್ಲಿ ಬಹುಶಃ ಇದೇ ಮೊದಲು! ಅವರೆಲ್ಲ ಆಗಲೇ ತಮ್ಮ ಮನೆಗಳನ್ನೆಲ್ಲ ತೊರೆದು ಹಚ್ಚಹಸಿರಿನ ಇಸ್ಲಾಂನ ಹುಲುಸಾದ ಪ್ರದೇಶಕ್ಕೆ ವಲಸೆ ಹೊರಟಿದ್ದರು. ವಿದೇಶೀ ಆಡಳಿತಗಾರರು ಎಳೆದ ಕೃತಕ ಬೌಂಡರಿ ಗೆರೆಗಳನ್ನು ದಾಟುತ್ತಿರುವಂತೆಯೇ ಲಕ್ಷಾಂತರ ಮಂದಿ ರಕ್ತದ ಪ್ರವಾಹದಲ್ಲಿ ಕೊಚ್ಚಿಹೋದರು.
ಪಾಕಿಸ್ತಾನದ ವೈಫಲ್ಯವೇ ಇಸ್ಲಾಂನ ವೈಫಲ್ಯ
ಪ್ರಗತಿಶೀಲ, ಪ್ರಜಾಸತ್ತಾತ್ಮಕ ಶಾಂತಿಯುತ ರಾಷ್ಟ್ರವಾಗಿ ಹೊರಹೊಮ್ಮುವುದಕ್ಕೆ ಪಾಕಿಸ್ತಾನದ ವೈಫಲ್ಯಕ್ಕೆ, ನನ್ನ ಪ್ರಕಾರ, ಅದರ ನಂಬಿಕೆ - ಇಸ್ಲಾಂನದ್ದೇ ವೈಫಲ್ಯ. ಇಸ್ಲಾಂ ಒಂದು ಸಿದ್ಧಾಂತವಾಗಿ, ಪ್ರಜಾಸತ್ತಾತ್ಮಕ ಮತ್ತು ನೈತಿಕ ಮೌಲ್ಯಗಳು, ಮಾನವ ಸ್ವಾತಂತ್ರ್ಯಗಳು, ಸಮಾನತೆ, ಆಲೋಚನಾ ಸ್ವಾತಂತ್ರ್ಯ ಮತ್ತು ಕಾನೂನು ಆಡಳಿತದ ಜೊತೆಗೆ ಸಂಘರ್ಷದಲ್ಲಿದೆ ಎಂಬುದಕ್ಕೆ ಪಾಕಿಸ್ತಾನದ ಪ್ರಸ್ತುತ ಸ್ಥಿತಿಗತಿಯೇ ಸಾಕ್ಷಿ.
ಪಾಕಿಸ್ತಾನದ ಸಂವಿಧಾನವು ಕಟ್ಟಾ ಖುರಾನ್ ಮತ್ತು ಸುನ್ನತ್ ಆಧಾರಿತವಾಗಿದೆ. ಇಸ್ಲಾಂ ಧರ್ಮದಲ್ಲಿ ಪರಿಪಕ್ವವಾಗಿರುವ ಆಡಳಿತದ ತತ್ತ್ವಗಳನ್ನು ಅಳವಡಿಸಿಕೊಳ್ಳುವಲ್ಲಿನ ಪಾಕಿಸ್ತಾನ ವಿಫಲವಾಗಿದೆ. ಇಸ್ಲಾಂನ ಪವಿತ್ರ ಗ್ರಂಥದ ಆಧಾರದಲ್ಲಿರುವ ಯಾವುದೇ ಸಮಾಜವು ಕ್ರೌರ್ಯ ಮೆರೆಯುವ, ಸ್ವಾತಂತ್ರ್ಯ ಹತ್ತಿಕ್ಕುವ, ಆಧುನಿಕತೆಯನ್ನು ವಿರೋಧಿಸುವ ಮತ್ತು ಅಸಹಿಷ್ಣುವಾಗಿರುತ್ತದೆ ಎಂದು ಪಾಕಿಸ್ತಾನವನ್ನು ನೋಡಿದರೆ ತಿಳಿಯಬಹುದು. ಆದರೆ, ಭಗವದ್ಗೀತೆಯಲ್ಲಿ ಪರಿಪಕ್ವವಾಗಿರುವ ಆಡಳಿತ ಮತ್ತು ಯುದ್ಧದ ನೀತಿಗಳು ಯಾವುದೇ ಸಂವಿಧಾನವನ್ನು ಸಹಿಷ್ಣುತೆ, ಶಾಂತಿ, ಮಾನವ ಸೌಹಾರ್ದದ ಮಾರ್ಗದಲ್ಲಿ ಕೊಂಡೊಯ್ಯುತ್ತದೆ.
ಹಿಂದುತ್ವದಲ್ಲಿರುವ ಸಹಿಷ್ಣುತೆ ಹಾಗೂ ಇಸ್ಲಾಮಿನಲ್ಲಿ ಸಾರ್ವತ್ರಿಕವಾಗಿ ಕಾಣುತ್ತಿರುವ ಉಗ್ರವಾದದ ಮೌಲ್ಯಗಳು ಅವರವರ ನಂಬಿಕೆಗಳು ಮತ್ತು ಸಾಂಸ್ಕೃತಿಕ ಸಂಪ್ರದಾಯಗಳಿಂದಲೇ ಮಾರ್ಗದರ್ಶನ ಪಡೆದಿವೆ.
ಈ ಅಭಿಪ್ರಾಯದ ಸಾಕ್ಷಿ, ಅದರ ಹುರುಳಿನಲ್ಲೇ ಇದೆ - ಇಸ್ಲಾಮಿಕ್ ಪಾಕಿಸ್ತಾನ ಹಾಗೂ ಹಿಂದೂ ಬಹುಸಂಖ್ಯಾತರಿರುವ ಜಾತ್ಯತೀತ ಭಾರತ - ಎರಡನ್ನೂ ಹೋಲಿಸಿ ನೋಡೋಣ.
ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಭಾರತವು ಇದುವರೆಗೆ 14 ಪ್ರಧಾನ ಮಂತ್ರಿಗಳು ಮತ್ತು 27 ಮಂದಿ ಸೇನಾ ಮುಖ್ಯಸ್ಥರನ್ನು (ಸಿಐಸಿ ಸೇರಿದರೆ 32) ಕಂಡಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವನ್ನು ಗಮನಿಸಿದರೆ, 22 ಪ್ರಧಾನ ಮಂತ್ರಿಗಳು ಮತ್ತು 12 ಸೇನಾ ಮುಖ್ಯಸ್ಥರನ್ನು ಅದು ಕಂಡಿದೆ. ಇದುವರೆಗೆ ಮೂರು ಬಾರಿ (1977, 1999 ಮತ್ತು 2007) ಉಲ್ಲಂಘನೆಯಾಗಿ ರೂಪುಗೊಂಡ ಸಂವಿಧಾನವು ಪ್ರಸ್ತುತ ಚಾಲ್ತಿಯಲ್ಲಿದೆ. ಭಾರತದಲ್ಲಿ? ಕಳೆದ 72 ವರ್ಷಗಳಿಂದ ಒಂದೇ ಸಂವಿಧಾನವಿದೆ.
ಪಾಕಿಸ್ತಾನದ ಪ್ರಧಾನ ಮಂತ್ರಿಗಳ ದಾಖಲೆ
74 ವರ್ಷಗಳಲ್ಲಿ ಯಾವುದೇ ಪ್ರಧಾನ ಮಂತ್ರಿಯೂ ಪಾಕಿಸ್ತಾನದಲ್ಲಿ ಅವಧಿ ಪೂರ್ಣಗೊಳಿಸಿಲ್ಲ. ಈ 22 ಪ್ರಧಾನಿಗಳಲ್ಲಿ, 18 ಪ್ರಧಾನಿಗಳನ್ನು ಮಿಲಿಟರಿಯು ಬಲವಂತವಾಗಿ ಕಿತ್ತೆಸೆಯಿತು. 3 ಬಾರಿ ಆಯ್ಕೆಯಾದ ನವಾಜ್ ಶರೀಫ್ 15 ವರ್ಷಗಳ ಕಾಲ ಅಧಿಕಾರದಲ್ಲಿರಲು ಜನಾದೇಶ ದೊರೆತಿತ್ತಾದರೂ, 3 ಅವಧಿಯಲ್ಲಿ ಒಟ್ಟು 8 ವರ್ಷಗಳನ್ನು ಮಾತ್ರ ಪೂರೈಸುವುದು ಸಾಧ್ಯವಾಯಿತು. 10 ವರ್ಷದ ಜನಾದೇಶ ಪಡೆದಿದ್ದ ಬೆನಜೀರ್ ಭುಟ್ಟೋ,ಕೇವಲ 4 ವರ್ಷ ಆಳ್ವಿಕೆ ಮಾಡಿದರು ಮತ್ತು ಅವರನ್ನು ಹತ್ಯೆ ಮಾಡಲಾಯಿತು. ಅವರ ತಂದೆ ಜುಲ್ಫಿಕರ್ ಭುಟ್ಟೋ ಕೇವಲ 3 ವರ್ಷ ಆಳ್ವಿಕೆ ನಡೆಸಿದರು ಮತ್ತು ಅವರಿಗೆ ಮರಣದಂಡನೆ ವಿಧಿಸಲಾಯಿತು. ಪ್ರಥಮ ಪ್ರಧಾನಿ, ಲಿಯಾಕತ್ ಅಲಿಯನ್ನು 1951ರಲ್ಲಿ ಕೊಲೆ ಮಾಡಲಾಯಿತು ಮತ್ತು ಇದರ ಹಿಂದೆ ಒಳಸಂಚು ನಡೆಸಿದ್ದು ಜನರಲ್ ಅಯೂಬ್ ಖಾನ್. ಬಹುತೇಕ ಎಲ್ಲ ಪ್ರಧಾನಿಗಳಿಗೂ ಇದೇ ಗತಿಯಾಯಿತು. ಉದಾಹರಣೆಗೆ, ಯೂಸುಫ್ ರಝಾ ಗಿಲಾನಿ 4 ವರ್ಷ ಮಾತ್ರ ಆಳ್ವಿಕೆ ನಡೆಸಿದರೆ, ಜುನೆಜೋ 3 ವರ್ಷದ ಬಳಿಕ ಜಿಯಾ ಉಲ್ ಹಕ್ ಅವರಿಂದ ಉಚ್ಚಾಟಿತರಾದರು. ನಜೀಮುದ್ದೀನ್ 2 ವರ್ಷದ ಬಳಿಕ ಕಿತ್ತೆಸೆಯಲಾಯಿತು, ಸುಹ್ರಾವರ್ದಿ ಅವರನ್ನು ಒಂದೇ ವರ್ಷದಲ್ಲಿ ಉಚ್ಚಾಟನೆ ಮಾಡಲಾಯಿತು.
ಭಾರತೀಯ ಪ್ರಧಾನಿಗಳ ದಾಖಲೆ
ಭಾರತದಲ್ಲಿ, ಪ್ರಥಮ ಪ್ರಧಾನಿ ನೆಹರು ಅವರು 16 ವರ್ಷಗಳ ಆಳ್ವಿಕೆ ನಡೆಸಿದರೆ, ಇಂದಿರಾ ಗಾಂಧಿ ಕೂಡ ಒಟ್ಟು 16 ವರ್ಷ ದೇಶವಾಳಿದರು. ಮನಮೋಹನ್ ಸಿಂಗ್ 10 ವರ್ಷ, ವಾಜಪೇಯಿ ಒಟ್ಟು 6 ವರ್ಷ, ರಾಜೀವ್ ಗಾಂಧಿ 5 ವರ್ಷ ಇದ್ದರು. ಜನರಲ್ ಕೆ.ಎಸ್.ತಿಮ್ಮಯ್ಯ ಅವರು ದೀರ್ಘಕಾಲ (4 ವರ್ಷ) ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿದ್ದರು.
ಭಾರತೀಯ ಸೇನೆ Vs ಪಾಕಿಸ್ತಾನಿ ಸೇನೆ
ಭಾರತದ 11 ಸೇನಾ ಮುಖ್ಯಸ್ಥರು ತಲಾ ಎರಡು ವರ್ಷಗಳ ಕಾಲ ಹುದ್ದೆಯಲ್ಲಿದ್ದರು. ಈಗ ಪಾಕಿಸ್ತಾನವನ್ನು ನೋಡಿದರೆ, ಕೇವಲ 4 ಮಂದಿ ಸರ್ವಾಧಿಕಾರಿಗಳು (ಅಯೂಬ್, ಯಾಹ್ಯಾ, ಜಿಯಾ, ಮುಷರಫ್) 36 ವರ್ಷಗಳ ಅಧಿಕಾರವನ್ನು ಹಂಚಿಕೊಂಡರು. ಬೇರೆ ಸೇನಾ ಮುಖ್ಯಸ್ಥರೂ ದೀರ್ಘಾವಧಿಗೆ ಅಧಿಕಾರದಲ್ಲಿದ್ದರು. ಜನರಲ್ ಮೂಸಾ 8 ವರ್ಷ, ಜನರಲ್ ಕಯಾನಿ 6 ವರ್ಷ, ಜನರಲ್ ಗುಲ್ ಹಸನ್ 5 ವರ್ಷ ಮತ್ತು ಪ್ರಸ್ತುತ ಇರುವ ಬಾಜ್ವಾ 6 ವರ್ಷದಿಂದ ಅಧಿಕಾರದಲ್ಲಿದ್ದಾರೆ ಮತ್ತು ಇನ್ನಷ್ಟು ವರ್ಷ ಇರಬಲ್ಲರು.
ಒಟ್ಟಾರೆಯಾಗಿ ಹೇಳುವುದಾದರೆ,
ಇಸ್ಲಾಂನ ಮೌಲ್ಯಗಳನ್ನು ಅನುಸರಿಸುತ್ತಿರುವ (ಪಾಕಿಸ್ತಾನೀಯರು) ಅಪ್ರಜಾಸತ್ತಾತ್ಮಕವಾಗಿದ್ದಾರೆ, ಅಸಹಿಷ್ಣುಗಳಾಗಿದ್ದಾರೆ ಮತ್ತು ಉಗ್ರವಾದದ ಧೋರಣೆ ಹೊಂದಿದ್ದಾರೆ. ಇಸ್ಲಾಂನ ಹೀರೋಗಳೆಲ್ಲರೂ ರಕ್ತಸಿಕ್ತ ಆಡಳಿತದ ಇತಿಹಾಸ ಹೊಂದಿರುವ ಸರ್ವಾಧಿಕಾರಿಗಳೇ. ಮುಸ್ಲಿಂ ಬಹುಸಂಖ್ಯಾತವಾಗಿರುವ ಯಾವುದೇ ದೇಶದಲ್ಲಿಯೂ ಪ್ರಜಾಪ್ರಭುತ್ವವಿಲ್ಲ ಅಥವಾ ದೀರ್ಘಕಾಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮುಂದುವರಿಯಲು ಸಾಧ್ಯವಾಗಿಲ್ಲ. ಅವರ ನಂಬಿಕೆಯು ಬೇರೆಯವರ ಹಕ್ಕುಗಳನ್ನು ಗೌರವಿಸುವುದಿಲ್ಲ. ಅನುಸರಿಸಲೇಬೇಕಾದ ತಾರ್ಕಿಕ ನಿರ್ಣಯವೆಂದರೆ, ಇಸ್ಲಾಂ ಬೋಧನೆಯಿಂದ ಪ್ರೇರಿತವಾಗಿರುವ ಯಾವುದೇ ಸಮಾಜವೂ ಜಾತಿವಾದಿ, ಜನಾಂಗವಾದಿ, ಸರ್ವಾಧಿಕಾರಿತ್ವ, ಸ್ತ್ರೀಹಕ್ಕುಗಳ ದಮನಕಾರಿಯಾಗಿ ಮತ್ತು ಹಿಂಸಾತ್ಮಕವಾಗಿರುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮಾನವೀಯತೆ ಬಂದಾಗ ಅಲ್ಲಿ ರಕ್ತಪಾತದ ಸಾಧ್ಯತೆಗಳೇ ಹೆಚ್ಚಿರುತ್ತದೆ.
ಹೀಗಾಗಿ, ಹಿಂದು ಧರ್ಮದ ಮೌಲ್ಯಗಳ ಮಾರ್ಗದರ್ಶನ ಮಾಡುವ ಬೋಧನೆಗಳು, ಸಿದ್ಧಾಂತ ಮತ್ತು ಪುಸ್ತಕಗಳಿಗೆ ಋಣಿಯಾಗಿರಬೇಕು ನೀವು ಎಂದು ಭಾರತೀಯ ಮುಸ್ಲಿಮರಿಗೆ ನನ್ನ ಆಗ್ರಹವಾಗಿದೆ. ಭಾರತದ ಗಣರಾಜ್ಯ ದಿನವನ್ನು ನಮ್ಮ ಸ್ವರ್ಗಸದೃಶ ದಿನವನ್ನಾಗಿ ಆಚರಿಸುವಂತೆ ನಾನು ಎಲ್ಲ ಮುಸ್ಲಿಮರನ್ನು ಆಮಂತ್ರಿಸುತ್ತೇನೆ.
-ಉಮರ್ ಖಾಲಿದ್
0 ಕಾಮೆಂಟ್‌ಗಳು