ಮಂಗಳೂರು: ಇಂಡೋನೇಷ್ಯಾದ ಗರುಡಾ ವಿಮಾನವೊಂದು ಇಳಿಯುವಾಗ ಆಯತಪ್ಪಿ, ಯದ್ವಾತದ್ವಾ ಇಳಿದು, ಭಾರಿ ದುರಂತದಿಂದ ಪವಾಡಸದೃಶವಾಗಿ ಪಾರಾಯಿತು ಎಂಬ ವಿಡಿಯೊವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡಿವೆ. ಈ ವಿಡಿಯೊ ಸೂಕ್ಷ್ಮವಾಗಿ ಗಮನಿಸುವಾಗ, ಇದರಲ್ಲೇನೋ ನೈಜತೆ ಇಲ್ಲ ಎಂಬುದು ಕಂಡು ಬಂದ ಹಿನ್ನೆಲೆಯಲ್ಲಿ ಫ್ಯಾಕ್ಟ್ಇಂಡಿಯಾ.ಇನ್ ಈ ಬಗ್ಗೆ ಪರಿಶೀಲನೆ ನಡೆಸಿದಾಗ, ವೈರಲ್ ಆಗಿದ್ದ ಈ ವಿಡಿಯೊ ನಿಜವಾದದ್ದಲ್ಲ ಎಂಬುದು ದೃಢಪಟ್ಟಿದೆ.
ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.
ವೈರಲ್ ವಿಷಯ ಏನು?
ಇಂಡೋನೇಷ್ಯಾದ ವಿಮಾನವು ಪ್ರಯಾಣಿಕರೊಂದಿಗೆ ಪವಾಡಸದೃಶವಾಗಿ ಅಪಘಾತದಿಂದ ಪಾರಾಗಿದೆ. ದೇವರಿಗೆ ಧನ್ಯವಾದ ಎಂಬರ್ಥದಲ್ಲಿ ಫೇಸ್‌ಬುಕ್‌ನಲ್ಲಿ ಶಾರುಖ್ ರಫಿಕ್ ಎಂಬ ವ್ಯಕ್ತಿಯೊಬ್ಬರು ಜನವರಿ 9ರಂದು ಇಲ್ಲಿ ಪೋಸ್ಟ್ ಮಾಡಿದ್ದರು.
ಈ ಬಗ್ಗೆ ವಿಡಿಯೊದ ಒಂದು ಭಾಗದ ಸ್ಕ್ರೀನ್ ಶಾಟ್ ತೆಗೆದು, ಅದನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದಾಗ, ಸಾಕಷ್ಟು ವಿಡಿಯೊಗಳು ಗೋಚರವಾದವರು. ಇದೇ ವಿಡಿಯೊವನ್ನು ನದೀಂ ರಾಹಿ ಹೆಸರಿನ ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಜ.8ರಂದು ಪೋಸ್ಟ್ ಮಾಡಿದ್ದರು.
ಇದೇ ಹುಡುಕಾಟದ ಫಲಿತಾಂಶಗಳನ್ನು ಗೂಗಲ್‌ನಲ್ಲಿ ಮತ್ತಷ್ಟು ಪರಿಶೀಲನೆಗೊಳಪಡಿಸಿದಾಗ, ಒಂದು ಯೂಟ್ಯೂಬ್ ವಿಡಿಯೊದ ಲಿಂಕ್ ದೊರೆಯಿತು. ಅದು 2020ರ ಮೇ 1ರಂದು ಪೋಸ್ಟ್ ಆಗಿದ್ದ ವಿಡಿಯೊ. ಅದರ ಶೀರ್ಷಿಕೆ Most Crazy Emergency Landing By Drunk Pilot | X-Plane 11 ಹೀಗಿತ್ತು.
ಅಂತಿಮ ನಿರ್ಣಯ
ಈ ರೀತಿಯಾಗಿ ವಿಡಿಯೊಗಳಲ್ಲಿ ಗೇಮ್‌ಗಳಿಗಾಗಿ ಅಥವಾ ಬೇರಾವುದೇ ವಿಷಯಗಳಿಗಾಗಿ ತಿದ್ದುಪಡಿ ಮಾಡುವುದು, ಸೃಷ್ಟಿಸುವುದು ಈಗಿನ ತಂತ್ರಜ್ಞಾನದ ಕಾಲದಲ್ಲಿ ಸಾಧ್ಯ. ಹೀಗಾಗಿ, ಈ ರೀತಿ ವೈರಲ್ ಆಗಿರುವ ವಿಡಿಯೊವೊಂದು ನಕಲಿ ವಿಡಿಯೊ ಆಗಿದೆ ಮತ್ತು ಇಂಡೋನೇಷ್ಯಾದ ಗರುಡ ವಿಮಾನವು ಯಾವುದೇ ಸಂದರ್ಭದಲ್ಲಿ ಈ ರೀತಿಯ ಲ್ಯಾಂಡಿಂಗ್ ಮಾಡಿರಲಿಲ್ಲ. ಮಾಡಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು.
0 ಕಾಮೆಂಟ್‌ಗಳು