ದಿ ಕಾಶ್ಮೀರ್ ಫೈಲ್ಸ್ (The Kashmir Files) ಚಿತ್ರವು ಇಡೀ ದೇಶದಲ್ಲಿ ದೇಶ ಭಕ್ತಿಯನ್ನು ಹುಟ್ಟಿಸಿದೆ ಮತ್ತು ಹಿಂದೂಗಳಲ್ಲಿ ಜಾಗೃತಿ ಮೂಡಿಸಿದೆ. ಕಾಶ್ಮೀರಿ ಪಂಡಿತರು 1990ರ ದಶಕದಲ್ಲಿ ಕಾಶ್ಮೀರದ ಮನೆ-ಮಠವನ್ನೆಲ್ಲಾ ತೊರೆದು ರಾಜ್ಯದಿಂದ ಪಲಾಯನ ಮಾಡಲು ಕಾರಣವಾದ ಮುಸಲ್ಮಾನರಿಂದ ನಡೆದ ಹಿಂಸಾಚಾರ, ನರಮೇಧದ ಘಟನೆಗಳನ್ನು ಆಧರಿಸಿ ತೆಗೆಯಲಾದ ಚಿತ್ರವಾಗಿತ್ತದು. ಆದರೆ, ಇದು ಮುಸಲ್ಮಾನರ ವಿರುದ್ಧ ಹಿಂದೂಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಹಿಂದೂಗಳು ಮುಸಲ್ಮಾನರ ಮೇಲೆ ಆಕ್ರಮಣ ಮಾಡುತ್ತಿದ್ದಾರೆ ಎಂಬ ಕುರಿತಾಗಿ ಸಾಕಷ್ಟು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಇಂಥಹಾ ಪ್ರಚೋದನಕಾರಿ ವಿಡಿಯೊ ಪೋಸ್ಟ್ ಬಗ್ಗೆ ಫ್ಯಾಕ್ಟ್ಇಂಡಿಯಾ.ಇನ್, ಅಂತರಜಾಲದಲ್ಲಿ ಫ್ಯಾಕ್ಟ್ ಚೆಕ್ ನಡೆಸಿದ್ದು, ಇದು ಸುಳ್ಳು ಹರಡುವಿಕೆ ಎಂಬುದನ್ನು ಕಂಡುಕೊಂಡಿದೆ. ಹೇಗೆಂದರೆ...
ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.ये सब #kashmirifiles फिल्म देखने के बाद का सीन है!
#मुसलमानों को अपनी सुरक्षा के लिए हमेशा तैयार रहें क्योंकि आतंकी अब खुलेआम आतंक करेंगे! #MuslimLivesMatter #Muslim pic.twitter.com/nUK5HMn33z
— Zulekha Khan (@afzal_zulekha) March 21, 2022
ये सब #kashmirifiles फिल्म देखने के बाद का सीन है!
#मुसलमानों को अपनी सुरक्षा के लिए हमेशा तैयार रहें क्योंकि आतंकी अब खुलेआम आतंक करेंगे! #MuslimLivesMatter #Muslim pic.twitter.com/nUK5HMn33z
ಉದಾಹರಣೆಗೆ, ಜುಲೇಖಾ ಖಾನ್ ಎಂಬ ಟ್ವಿಟರ್ ಬಳಕೆದಾರರು ಈ ಪೋಸ್ಟನ್ನು ಹಂಚಿಕೊಂಡಿದ್ದರು. ಈ ವಿಡಿಯೊದಲ್ಲಿ ಮುಸಲ್ಮಾನ ವ್ಯಕ್ತಿಗಳ ಅಂಗಡಿಗೆ ವ್ಯಕ್ತಿಯೊಬ್ಬ ಬಂದು ದಾಂಧಲೆ ನಡೆಸಿದ ದೃಶ್ಯವಿದೆ. ಅಂಗಡಿಯೊಳಗಿದ್ದವರೂ ದಾಳಿ ಮಾಡಿದಾತನ ಮೇಲೆ ಪ್ರತಿ ದಾಳಿ ನಡೆಸುತ್ತಿದ್ದರು. ಆದರೆ ಈ ಸಿಸಿಟಿವಿ ಆಧರಿತ ಫೂಟೇಜ್‌ಗೆ ನೀಡಿದ ಅಡಿಬರಹದಲ್ಲಿ ಮಾತ್ರ, ಹಿಂದೂಗಳು ಮುಸಲ್ಮಾನರ ಮೇಲೆ ಹಲ್ಲೆ ನಡೆಸಲಾರಂಭಿಸಿದ್ದಾರೆ ಎಂಬರ್ಥದ ಸಂದೇಶವಿತ್ತು.
ಹಿಂದಿಯಲ್ಲಿದ್ದ ಈ ಪೋಸ್ಟ್‌ನ ಅನುವಾದ ಇಂತಿದೆ: ಇವೆಲ್ಲವೂ ಚಿತ್ರ ನೋಡಿದ ನಂತರದ ದೃಶ್ಯಗಳು. ಮುಸಲ್ಮಾನರೇ, ನಿಮ್ಮ ನಿಮ್ಮ ಸುರಕ್ಷತೆಗೆ ಸದಾ ಕಾಲವೂ ಸಿದ್ಧವಾಗಿರಿ, ಯಾಕೆಂದರೆ ಭಯೋತ್ಪಾದಕರು ಈಗ ಮುಕ್ತವಾಗಿ ಭಯ ಉತ್ಪಾದಿಸುತ್ತಾರೆ!.
ಇದೇ ರೀತಿ ಇನ್ನೂ ಹಲವು ಕಡೆ ಇಂಥದ್ದೇ ಪೋಸ್ಟ್‌ಗಳನ್ನು ಮಾಡಲಾಗಿದ್ದು, ಅವುಗಳೆಲ್ಲದರ ಅಡಿಬರಹ ಬಹುತೇಕ ಒಂದೇ ರೀತಿ ಇತ್ತು. ಹೀಗಾಗಿ ಇದು ಪ್ರೊಪಗಾಂಡಾ ಇರಬಹುದೆಂಬುದು ಮನದಟ್ಟಾಯಿತು. ಇಲ್ಲಿ ಮತ್ತು ಇಲ್ಲಿ ಹಾಗೂ ಇಲ್ಲಿ ನೋಡಿ. ಇವುಗಳ ಹೆಸರೇ ವಿಚಿತ್ರವಾಗಿದೆ ಎಂಬುದು ಗಮನಿಸಬೇಕಾದ ಅಂಶ.
ಆದರೆ, ಜೈಶ್ ಮೊಹಮ್ಮದ್ ಎಂಬವರು ಹಂಚಿಕೊಂಡ ವಿಡಿಯೊದಲ್ಲಿರುವ ಒಂದು ಸೀಲ್‌ನಲ್ಲಿ ಸೂರತ್ ಬ್ರೆಕಿಂಗ್ (Surat Breking) ಅಂತ ಬರೆದಿತ್ತು. ಮತ್ತು ಎಲ್ಲ ವಿಡಿಯೊಗಳ ದಿನಾಂಕವೂ 15 ಮಾರ್ಚ್ 2022 ಆಗಿದ್ದವು. ಈ ಸುಳಿವು ಆಧರಿಸಿ ಮತ್ತಷ್ಟು ಸಂಶೋಧನೆ ಮಾಡಲಾಯಿತು.
ಇದರ ಅನುಸಾರ, ಸೂರತ್ ಶಾಪ್ ಅಟ್ಯಾಕ್ ಎಂಬ ಕೀವರ್ಡ್ ಬಳಸಿ ಗೂಗಲ್‌ನಲ್ಲಿ ಹುಡುಕಿದಾಗ, ಮತ್ತೊಂದು ವಿಡಿಯೊ ಸಿಕ್ಕಿತು. ಇದು ಬಹುತೇಕ ವೈರಲ್ ವಿಡಿಯೊವನ್ನೇ ಹೋಲುತ್ತಿತ್ತು.
ಅದರಲ್ಲಿರುವ ಕ್ಯಾಪ್ಷನ್‌ನಲ್ಲಿ ctv caught attack on bhatena base shop keeper surat salabatpura po.st area ಎಂದು ಬರೆಯಲಾಗಿತ್ತು. ಹೀಗಾಗಿ, ಇದು ಸೂರತ್ ವಿಡಿಯೊ ಎಂಬುದು ಬಹುತೇಕ ಮನದಟ್ಟಾಯಿತು.
ವಿಡಿಯೊಗಳನ್ನು ಸರಿಯಾಗಿ ವೀಕ್ಷಿಸಿ, ಅದರಲ್ಲಿರುವ ಕೆಲವು ಫ್ರೇಮ್‌ಗಳನ್ನು ಮಾತ್ರವೇ ಟೂಲ್ ಮೂಲಕ ಪ್ರತ್ಯೇಕಿಸಿ, ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಫ್ಯಾಕ್ಟ್ಇಂಡಿಯಾ ತಂಡವು ಹುಡುಕಿತು. ಜೊತೆಗೆ ಸೂರತ್ ಹಾಗೂ ಅಂಗಡಿ ದಾಳಿಗೆ ಸಂಬಂಧಿಸಿದ ಕೀವರ್ಡ್‌ಗಳನ್ನೂ ಜೋಡಿಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಸತ್ಯ ವಿಷಯ ಹೊರಬಿತ್ತು.
ಈ ವಿಡಿಯೊ, ನಿಜವಾದ ಘಟನೆಯದ್ದೇ ಆಗಿದೆ. ಆದರೆ ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೂ, ಇದಕ್ಕೂ ಸಂಬಂಧ ಇಲ್ಲ. ಈ ಕುರಿತು ನ್ಯೂಸ್18 ಜಾಲತಾಣ ಗುಜರಾತಿ ಭಾಷೆಯಲ್ಲಿ ಇಲ್ಲಿ ವರದಿ ಮಾಡಿದೆ.
ಗುಜರಾತ್‌ನ ಸೂರತ್‌ನಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಖಡ್ಗ (ಲಾಂಗ್) ಮತ್ತು ಕಬ್ಬಿಣದ ಬಡಿಗೆಗಳನ್ನು ಹಿಡಿದ ಇಬ್ಬರು, ಮುಸಲ್ಮಾನರು ಕುಳಿತಿದ್ದ ಅಂಗಡಿ ಮಳಿಗೆಯೊಂದಕ್ಕೆ ದಾಳಿ ಮಾಡುತ್ತಾರೆ. ಅಂಗಡಿಯ ಒಳಗಿದ್ದವರೂ ಪ್ರತಿದಾಳಿ ನಡೆಸುತ್ತಾರೆ. 11 ಮಂದಿಯ ವಿರುದ್ಧ ಕೇಸು ದಾಖಲಾಗಿದ್ದು, ಅವರಲ್ಲಿ 10 ಮಂದಿಯೂ ಮುಸಲ್ಮಾನರು ಎಂದು ಸಲಬತ್ ಪುರ ಪೊಲೀಸರು ಸ್ಪಷ್ಟಪಡಿಸಿರುವ ವಿಚಾರ.
ಮಾ.20ರಂದು ನ್ಯೂಸ್18 ಪ್ರಕಟಿಸಿರುವ ವರದಿಯ ಅನುಸಾರ, ಸೂರತ್‌ನ ಭಾತೇನಾ ಎಂಬಲ್ಲಿನ ಸಲಬತ್‌ಪುರದಲ್ಲಿ ಈ ಘಟನೆ ನಡೆದಿದೆ. 'ಹಫ್ತಾ' ನೀಡದೇ ಇರುವುದಕ್ಕಾಗಿ ಈ ದಾಳಿ ನಡೆದಿದೆ ಎನ್ನುತ್ತದೆ ವರದಿ. ಅಂಗಡಿಯವರು ಈ ದಂಧೆಕೋರರ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇ ಈ ದಾಳಿಗೆ ಮೂಲ ಕಾರಣ ಮತ್ತು ದಾಳಿ ಮಾಡಿದವರು ಕೂಡ ಮುಸಲ್ಮಾನರೇ ಎಂಬುದು ಅಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ನಿಂದ ತಿಳಿದುಬರುತ್ತದೆ. ಅಂದರೆ, ಖಡ್ಗದಿಂದ ದಾಳಿ ನಡೆಸಿದವನೂ ಮುಸಲ್ಮಾನ ವ್ಯಕ್ತಿಯೇ ಆಗಿದ್ದು, ಈ ಘಟನೆಗೂ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕಾಗಲೀ, ಅಥವಾ ಯಾವುದೇ ಕೋಮು ಸಂಬಂಧಿತ ಲಿಂಕ್ ಆಗಲೀ ಇಲ್ಲ.
ಅಂತಿಮ ನಿರ್ಣಯ
ಸೂರತ್‌ನಲ್ಲಿ ಹಿಂದೂಗಳು ಮುಸಲ್ಮಾನರ ಮೇಲೆ ದಾಳಿ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ವಿಡಿಯೊ, ದಾರಿ ತಪ್ಪಿಸುವಂಥದ್ದು. ದಾಳಿ ನಡೆದಿದ್ದು ನಿಜವಾದರೂ, ದಾಳಿ ಮಾಡಿದವರು ಮತ್ತು ದಾಳಿಗೊಳಗಾದವರು ಕೂಡ ಒಂದೇ (ಮುಸಲ್ಮಾನ) ಸಮುದಾಯದವರು. ಈ ದಾಳಿ ನಡೆದಿರುವುದು 'ಹಫ್ತಾ' ನೀಡದಿರುವ ಕಾರಣಕ್ಕಾಗಿಯೇ ಹೊರತು, ಇದರಲ್ಲಿ ಯಾವುದೇ ಕೋಮು ಸಂಬಂಧಿತ ವಿವಾದ ಇಲ್ಲ.
0 ಕಾಮೆಂಟ್‌ಗಳು