ವೈರಲ್ ಆಗಿರುವ ವಿಷಯ ಏನು?
ಎಲ್ಲ ರಾಜಕೀಯ ಪಕ್ಷಗಳಿಗೆ ಅತ್ಯಂತ ಮಹತ್ವದ್ದಾಗಿರುವ ಉತ್ತರ ಪ್ರದೇಶದಲ್ಲಿ ಅಧಿಕಾರಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಸಮಾಜವಾದಿ ಪಕ್ಷಗಳು ಅಧಿಕಾರಕ್ಕಾಗಿ ಭಾರಿ ಕಸರತ್ತು ನಡೆಸಿದ್ದವು. ಈ ಮಧ್ಯೆ, ಬಹುತೇಕ ಮತಗಟ್ಟೆ ಸಮೀಕ್ಷೆಗಳು (Exit Polls 2022) ಉತ್ತರ ಪ್ರದೇಶದ ಚುನಾವಣೆಯ ಫಲಿತಾಂಶದಲ್ಲಿ, ಬಿಜೆಪಿಯೇ ಅಧಿಕಾರಕ್ಕೆ ಮರಳಲಿವೆ ಎಂದು ಬಿಂಬಿಸಿದ್ದವು. ಆದರೆ, Times Now - VETO Exit Polls ಪ್ರಕಾರ, ಸಮಾಜವಾದಿ ಪಕ್ಷ ಮಿತ್ರಕೂಟಕ್ಕೆ ಬಹುಮತ ದೊರೆತಿರುವ ಗ್ರಾಫಿಕ್ಸ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ಯುಪಿ-ತಕ್ ಟಿವಿ ಚಾನೆಲ್‌ನಲ್ಲಿ ಪ್ರಸಾರವಾಗಿದೆ ಎಂಬಂತೆ ಬಿಂಬಿಸಲಾಗಿದೆ.
ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಈ ರೀತಿಯ ಒಂದು ಪೋಸ್ಟನ್ನು ಶೇರ್ ಮಾಡಿಕೊಂಡವರು ಚಂದ್ರಭಾನು ಯಾದವ್ ಎಂಬ ಫೇಸ್‌ಬುಕ್ ಬಳಕೆದಾರ. ಅದರ ಲಿಂಕ್ ಇಲ್ಲಿದೆ.:
ಇದರ ಪ್ರಕಾರ, ಸಮಾಜವಾದಿ ಪಕ್ಷ ಮಿತ್ರಕೂಟಕ್ಕೆ 225 ಸ್ಥಾನಗಳು, ಬಿಜೆಪಿ ಮೈತ್ರಿಕೂಟಕ್ಕೆ 151 ಸ್ಥಾನಗಳು ದೊರೆಯಲಿದೆ ಎಂಬುದಾಗಿ ಬಿಂಬಿಸಲಾಗಿತ್ತು. ಇದರರ್ಥ, ಕ್ಲೇಮ್ ಪ್ರಕಾರ, ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ಸಮ್ಮಿಶ್ರ ಸರಕಾರ ರಚಿಸಲಿದೆ.
ಫ್ಯಾಕ್ಟ್ ಇಂಡಿಯಾ ತನಿಖೆ
ಈ ವಿಷಯದ ಕುರಿತು Factindia.in ತನಿಖೆ ನಡೆಸಿದೆ. ಮಾ.7ರಂದು 7ನೇ ತಥಾ ಅಂತಿಮ ಸುತ್ತಿನ ಮತದಾನವು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಮಾ.10ರಂದು ಅಧಿಕೃತವಾಗಿ ಫಲಿತಾಂಶವು ಪ್ರಕಟವಾಗಲಿದೆ. ಮಾ.7ರಂದು ಹಲವಾರು ಏಜೆನ್ಸಿಗಳು ಮತಗಟ್ಟೆ ಸಮೀಕ್ಷೆಯ ಫಲಿತಾಂಶ ಪ್ರಕಟಿಸಿದ್ದವು. ಅವುಗಳಲ್ಲಿ ಆಜ್ ತಕ್- ಆಕ್ಸಿಸ್ ಮೈ ಇಂಡಿಯಾ, ಎಬಿಪಿ-ಸಿ ವೋಟರ್, ನ್ಯೂಸ್ 24-ಚಾಣಕ್ಯ, ಝೀ ನ್ಯೂಸ್ - ಡಿಸೈನ್ ಬಾಕ್ಸ್ಡ್ ಮತ್ತು ಟೈಮ್ಸ್ ನೌ-ವಿಟೋ ಸಮೀಕ್ಷೆಗಳು ಪ್ರಮುಖವಾದವು. ಇವುಗಳೆಲ್ಲವೂ ಹೇಳಿರುವುದು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರವೇ ಮತ್ತೆ ಉತ್ತಮ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬುದಾಗಿ.
ಟೈಮ್ಸ್ ನೌ ವಿಟೋ ಸಮೀಕ್ಷೆಯ ಪ್ರಕಾರ, ಬಿಜೆಪಿ ಮೈತ್ರಿಕೂಟಕ್ಕೆ 225 ಸ್ಥಾನಗಳು, ಸಮಾಜವಾದಿ ಪಕ್ಷ ಮೈತ್ರಿಕೂಟಕ್ಕೆ 151 ಸ್ಥಾನಗಳು ದೊರೆಯಲಿವೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಟೈಮ್ಸ್ ನೌ-ವಿಟೋ ಸಮೀಕ್ಷೆಯ ಗ್ರಾಫಿಕ್ಸ್ ಅನ್ನು ತಿದ್ದುಪಡಿ ಮಾಡಿ, ಎರಡೂ ಪಕ್ಷಗಳ ಸ್ಥಾನಗಳ ಸಂಖ್ಯೆಯನ್ನು ಅದಲುಬದಲು ಮಾಡಿ ಶೇರ್ ಮಾಡಿರುವುದು ಖಚಿತವಾಯಿತು. ಅದರ ಹೋಲಿಕೆಯ ಚಿತ್ರ ಇಲ್ಲಿದೆ.
ಟೈಮ್ಸ್ ನೌ ಹಾಗೂ ಯುಪಿ ತಕ್‌ಗಳ ಸೋಷಿಯಲ್ ಮೀಡಿಯಾ ಚಾನೆಲ್‌ಗಳಲ್ಲಿ ಶೇರ್ ಆಗಿರುವ ಗ್ರಾಫಿಕ್ಸ್ ಅನ್ನೂ ಹುಡುಕಿ ನೋಡಿದಾಗ, ಸಂಖ್ಯೆ ಅದಲು ಬದಲು ಮಾಡಿರುವುದು ಖಚಿತವಾಯಿತು.
ಯುಪಿ ತಕ್ ಸೋಷಿಯಲ್ ಮೀಡಿಯಾದಲ್ಲಿರುವ ಮೂಲ ಪೋಸ್ಟ್ ಲಿಂಕ್ ಇಲ್ಲಿದೆ:
ಟೈಮ್ಸ್ ನೌ ಚಾನೆಲ್‌ನಲ್ಲಿ ಪ್ರಸಾರವಾದ ಅಂಕಿ ಅಂಶಗಳು ಇಲ್ಲಿವೆ:
UP Pol Strat exit polls: BJP to retain power with a reduced majority#ExitPollWithTimesNow #UttarPradeshElections
— TIMES NOW (@TimesNow) March 7, 2022
LIVE UPDATES: https://t.co/uGYJjgzOQI pic.twitter.com/3uHtPV5bgg
ಅಂತಿಮ ನಿರ್ಣಯ
ಟೈಮ್ಸ್ ನೌ - ವಿಟೋ ಚುನಾವಣೋತ್ತರ ಸಮೀಕ್ಷೆಯಲ್ಲಿ ಸಮಾಜವಾದಿ ಪಕ್ಷ ಮೈತ್ರಿಕೂಟವು ಉತ್ತರ ಪ್ರದೇಶದಲ್ಲಿ 225 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಿಂಬಿಸಲಾದ ಗ್ರಾಫಿಕ್ಸ್ ಸುಳ್ಳು ಮತ್ತು ತಿದ್ದಿದ ಮಾಹಿತಿ ಆಗಿರುತ್ತದೆ. ಟೈಮ್ಸ್ ನೌ-ವಿಟೋ ಸಮೀಕ್ಷೆಯ ಪ್ರಕಾರ, ಬಿಜೆಪಿಗೆ 225, ಸಮಾಜವಾದಿ ಪಕ್ಷಕ್ಕೆ 151 ಸ್ಥಾನಗಳು ಲಭ್ಯವಾಗಲಿವೆ ಎಂಬುದು ನಿಜವಾದ ಸುದ್ದಿ.
0 ಕಾಮೆಂಟ್‌ಗಳು