ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯವಾಗಿದ್ದ ಕಾಶ್ಮೀರಿ ಪಂಡಿತರ ವಲಸೆಗೆ ಮತ್ತು ಅಲ್ಲಿ ಭಯೋತ್ಪಾದಕತೆ ಹೆಚ್ಚಳಕ್ಕೆ ಕಾರಣವಾದ ಘಟನಾವಳಿಗಳಿಗೆ ಫಾರೂಕ್ ಅಬ್ದುಲ್ಲಾರೇ ಕಾರಣ ಎಂಬುದು ಕಾಶ್ಮೀರಿ ಪಂಡಿತರ ಮನಸ್ಸಿನಲ್ಲಿ ಬೇರೂರಿದ ಅಂಶ.
ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಇತಿಹಾಸ ನೋಡೋಣ
1986ರ ನವೆಂಬರ್ 7 ಹಾಗೂ 1990ರ ಜನವರಿ 18ರವರೆಗೆ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಅವರು ಮುಖ್ಯಮಂತ್ರಿಯಾಗಿದ್ದರು. ಗುಪ್ತಚರ ಏಜೆನ್ಸಿಗಳು ನೀಡಿದ ಎಚ್ಚರಿಕೆಯ ಸೂಚನೆಗಳ ಹೊರತಾಗಿಯೂ ಕಾಶ್ಮೀರದ ಪರಿಸ್ಥಿತಿ ಕುಸಿಯುತ್ತಾ ಬಂತು ಮತ್ತು ವರದಿಯ ನಿರ್ಲಕ್ಷ್ಯಕ್ಕೆ ಬೆಲೆ ತೆರಬೇಕಾಗಿಬಂತು.
ಅದಕ್ಕೆ ಮೊದಲೇ, 1986ರ ಫೆಬ್ರವರಿ ತಿಂಗಳಲ್ಲೇ ದಕ್ಷಿಣ ಕಾಶ್ಮೀರದಲ್ಲಿ ಕೋಮು ದಾಳಿಗಳಾದವು. ಮುಸಲ್ಮಾನರು ಗುಂಪು ಕಟ್ಟಿಕೊಂಡು ಬಂದು ಕಾಶ್ಮೀರಿ ಪಂಡಿತರ ಆಸ್ತಿಪಾಸ್ತಿಗಳು ಮತ್ತು ದೇವಾಲಯಗಳನ್ನು ದೋಚಿದರು, ಹಾನಿ ಮಾಡಿದರು ಮತ್ತು ಹಿಂಸಾತ್ಮಕ ದಾಳಿ ಎಸಗಿದರು.
ಫಾರೂಕ್ ಅಬ್ದುಲ್ಲಾ ಅವರ ಬಾವನೆಂಟನಾಗಿದ್ದ ಗುಲಾಂ ಮೊಹಮದ್ ಶಾ ಆಗ ಮುಖ್ಯಮಂತ್ರಿಯಾಗಿದ್ದರು. ಹಿಂಸಾಚಾರ ಹತ್ತಿಕ್ಕಲು ವಿಫಲರಾದ ಅವರು ಈ ಗಲಾಟೆ ನಿಯಂತ್ರಿಸಲು ಸೇನೆಯನ್ನು ಕರೆಸಿಕೊಂಡರು. ಅಂದಿನ ರಾಜ್ಯಪಾಲರಾಗಿದ್ದ ಜಗಮೋಹನ್ ಅವರು 1986ರ ಮಾರ್ಚ್ ತಿಂಗಳಲ್ಲಿ ಗುಲಾಂ ಸರಕಾರವನ್ನು ವಜಾಗೊಳಿಸಿದರು. ಆ ಕಾಲದಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ಮತ್ತು ಮುಖ್ಯಮಂತ್ರಿ ಹುದ್ದೆಗೇರಲು ತಹತಹಿಸುತ್ತಿದ್ದ ಮುಫ್ತಿ ಸಯೀದ್ ಅವರೇ ಈ ಗಲಭೆಯನ್ನು ಹುಟ್ಟುಹಾಕಿದರು ಎಂದು ಆ ಕಾಲದಲ್ಲಿ ಭಾರಿ ಸುದ್ದಿಯಾಗಿತ್ತು.
ಆ ಕಾಲದಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದರು ಮತ್ತು ಸಯೀದ್‌ಗೆ ರಾಜ್ಯಸಭಾ ಸ್ಥಾನ ನೀಡಿ ಅವರನ್ನು ಕೇಂದ್ರದ ಮಂತ್ರಿಯಾಗಿ ನೇಮಿಸಿಕೊಂಡರು. 1986ರ ನವೆಂಬರ್‌ನಲ್ಲಿ, ಅಂದರೆ ತಿಂಗಳುಗಟ್ಟಲೆ ಸಂಧಾನ ಪ್ರಕ್ರಿಯೆ ನಡೆದ ಬಳಿಕ, ರಾಜೀವ್ ಗಾಂಧಿ ಮತ್ತು ಫಾರೂಕ್ ಅಬ್ದುಲ್ಲಾ ಒಪ್ಪಂದಕ್ಕೆ ಬಂದರು ಮತ್ತು ಫಾರೂಕ್ ಅವರನ್ನು ಮುಖ್ಯಮಂತ್ರಿಯಾಗಿ ಮರುನೇಮಿಸಲಾಯಿತು.
ರಾತೋರಾತ್ರಿ ನಡೆದಿದ್ದಲ್ಲ ಈ ವಲಸೆ ಪ್ರಕ್ರಿಯೆ
ಇದೇ ಅವಧಿಯಲ್ಲಿ ನಡೆದಿದ್ದೇ ಕಾಶ್ಮೀರಿ ಪಂಡಿತರ ನರಮೇಧ. ಅಖಿಲ ಭಾರತ ಕಾಶ್ಮೀರಿ ಸಮಾಜ (ಎಐಕೆಎಸ್) ಅಧ್ಯಕ್ಷ ರಮೇಶ್ ರೈನಾ ಎಂಬವರು ಇತ್ತೀಚೆಗೆ ಐಎಎನ್ಎಸ್ ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ ಮಾತನ್ನೊಮ್ಮೆ ಕೇಳಬೇಕು. 1986-89ರ ಅವಧಿಯು ಕಾಶ್ಮೀರದ ಇತಿಹಾಸದಲ್ಲೇ ಅತ್ಯಂತ ಮಹತ್ವದ್ದು. ಆದರೆ ಇದನ್ನು ಎಲ್ಲರೂ ನಿರ್ಲಕ್ಷಿಸಿದರು, ಮರೆಮಾಚಿದರು. ಪಂಡಿತರ ವಲಸೆ ರಾತೋರಾತ್ರಿ ಸಂಭವಿಸಿದ್ದಲ್ಲ. ಇದಕ್ಕೆ ಪೂರ್ಣಪ್ರಮಾಣದ ಪೂರ್ವಸಿದ್ಧತೆ ಆಗಿತ್ತು. ಅಬ್ದುಲ್ಲಾ ಅವರು ಅದೇನೋ ಒಪ್ಪಂದದ ಮೂಲಕ ಇಡೀ ದೇಶವನ್ನೇ ಮೂರ್ಖರನ್ನಾಗಿಸಲು ಪ್ರಯತ್ನಿಸಿದರು. ಆತ ಒಬ್ಬ ಅಸಮರ್ಥ ಮತ್ತು ಆತನ ಕೈಯಲ್ಲಿ ಏನೂ ಇರಲಿಲ್ಲ ಅಂತ ನೀವು ಹೇಳಬಹುದು. ಅಥವಾ, ಆತನೇ ಇದೆಲ್ಲದರಲ್ಲಿ ಭಾಗಿಯಾಗಿದ್ದರು ಮತ್ತು ಎಲ್ಲವನ್ನೂ ತಿಳಿದಿದ್ದರು ಹಾಗೂ ಈ ಘಟನಾವಳಿಗಳು ಮೇರೆ ಮೀರಲು ಮೌನವಾಗಿಯೇ ಅವಕಾಶ ಕೊಟ್ಟರು ಅಂತಲೂ ಹೇಳಬಹುದು.
ಈಗ ಸತ್ಯಾಂಶ ಹೊರಬರುತ್ತಿದೆ. ಎಲ್ಲದಕ್ಕೂ ಫಾರೂಕ್ ಅಬ್ದುಲ್ಲಾ ಅವರೇ ಕಾರಣ ಎಂಬ ವರದಿಗಳು, ಆರೋಪಗಳು ಕೇಳಿಬರತೊಡಗಿದಂತೆಯೇ ಅವರು ಕೂಡ "ನಾನು ತಪ್ಪಿ ಮಾಡಿದ್ದರೆ ಗಲ್ಲಿಗೇರಲು ಸಿದ್ಧ" ಎಂಬಂತಹಾ ಹೇಳಿಕೆಯನ್ನೂ ಕೊಟ್ಟಿದ್ದಾರೆ.
ಕಾಶ್ಮೀರದ ಇತಿಹಾಸದ ಕುರಿತು ಪನೂನ್ ಕಾಶ್ಮೀರ್ ಮುಖಂಡ ರಮೇಶ್ ಮಾನ್ವತ್ ಎಂಬವರು ಹೀಗೆ ಹೇಳಿದ್ದಾರೆ: "ನ್ಯಾಷನಲ್ ಕಾನ್ಫರೆನ್ಸ್‌ನ ಮೂಲ ಅವತಾರವಾದ ಮುಸ್ಲಿಂ ಕಾನ್ಫರೆನ್ಸ್ 1930ರಲ್ಲಿ ಹುಟ್ಟಿಕೊಂಡಿದ್ದೇ ಕಾಶ್ಮೀರದಲ್ಲಿ ಮುಸಲ್ಮಾನರ ಹಕ್ಕುಗಳಿಗಾಗಿ ಹೋರಾಡುವುದಕ್ಕಾಗಿ. ಅವರು ಕಾಶ್ಮೀರದ ರಾಜನಾಗಿದ್ದ ಮಹಾರಾಜ ಹರಿಸಿಂಗ್ ವಿರುದ್ಧ ಹೋರಾಡಲಾರಂಭಿಸಿದರು, ಸ್ವತಂತ್ರ ಕಾಶ್ಮೀರದ ಕನಸನ್ನು ಪೋಷಿಸಿದರು. ಇದರ ಫಲವಾಗಿಯೇ 1940ರ ದಶಕದಲ್ಲಿ 'ಕಾಶ್ಮೀರದಿಂದ ತೊಲಗಿ' ಅಭಿಯಾನ ಆರಂಭಿಸಲಾಗಿತ್ತು. ತತ್ಫಲವಾಗಿ 1950ರ ದಶಕದಲ್ಲಿ ಅದರ ಸಂಸ್ಥಾಪಕ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರನ್ನೇ ವಜಾಗೊಳಿಸಲಾಯಿತು. ಕೋಮುವಾದಿ ಮುಸಲ್ಮಾನ ಮನೋಸ್ಥಿತಿ ಮತ್ತು ಅಲ್ಪಸಂಖ್ಯಾತರಾದ ಕಾಶ್ಮೀರಿ ಪಂಡಿತರು ಹಾಗೂ ಅವರು ಪ್ರತಿನಿಧಿಸುವ ಭಾರತ ಕುರಿತಾಗಿ ನ್ಯಾಷನಲ್ ಕಾನ್ಫರೆನ್ಸ್‌ಗಿದ್ದ ಅಸ್ಥಿರ ಭಾವನೆಗಳು ಫಾರೂಕ್ ಅಬ್ದುಲ್ಲಾ ಅವರ ಸುದೀರ್ಘ ಆಳ್ವಿಕೆಯ ಅವಧಿಯಲ್ಲಿ ಮುಂದುವರಿಯುತ್ತಲೇ ಹೋಯಿತು."
ಕಾಶ್ಮೀರ ಮಣ್ಣಿನಲ್ಲಿ ಆಗುತ್ತಿರುವ ಎಲ್ಲ ಆಗು-ಹೋಗುಗಳ ಪ್ರಬಲ ಬೆಂಬಲಿಗರಾಗಿರುವ ಫಾರೂಕ್ ಅಬ್ದುಲ್ಲಾ, ಗಾಲ್ಫ್ ಆಟವಾಡುತ್ತಾ ಬಾಲಿವುಡ್ ಹೀರೋಯಿನ್‌ಗಳಿಗೆ ಜಾಯ್ ರೈಡ್ ಅವಕಾಶ ನೀಡುತ್ತಾ, ಕೊನೆಗೆ ಕಾಶ್ಮೀರವು ಹೊತ್ತಿ ಉರಿಯುವಾಗ ಮತ್ತು ಪಂಡಿತರ ನರಮೇಧ ನಡೆಯುತ್ತಿರುವಾಗ ಲಂಡನ್‌ಗೆ ಓಡಿಹೋಗಿಬಿಟ್ಟರು ಎಂದು ನೆನಪಿಸುತ್ತಾರೆ ರಮೇಶ್ ಮಾನ್ವತ್.
2016-2018ರ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆಗಿ ಕರ್ತವ್ಯ ನಿರ್ವಹಿಸಿದ್ದ ಶೇಷ ಪೌಲ್ ವೈದ್ ಅವರು ಮಾ.17ರಂದು ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನೀಡಿದ ಹೇಳಿಕೆಯನ್ನು ಗಮನಿಸಬೇಕು. ಆವತ್ತು ಬಂಧಿಸಲಾಗಿದ್ದ 70 ಮಂದಿ ಉಗ್ರರನ್ನು, ಪಂಡಿತರ ವಲಸೆಯ ಸಂದರ್ಭ ರಾಜಕೀಯ ಕಾರಣಗಳಿಗಾಗಿ ಬಿಡುಗಡೆ ಮಾಡಲಾಯಿತು. ಅದರ ಫಲವನ್ನು ಭಾರತ ಉಂಡಿದೆ ಎಂದಿದ್ದರವರು.
“Ill thought political decision” led to release of 70 ISI terrorists arrested by J&K Police, former J&K DGP SP Vaid wades into #TheKashmirFiles controversy
— TIMES NOW (@TimesNow) March 17, 2022
Listen in to the #Exclusive conversation between @spvaid & TIMES NOW's @DEKAMEGHNA#KashmirFilesCoverUp pic.twitter.com/mlHVmM3Egl
ಮಾರ್ಚ್ 16ರಂದು ಅವರು ಬರೆಯುತ್ತಾರೆ: "ದೇಶದಲ್ಲಿ ಅದೆಷ್ಟೋ ಮಂದಿಗೆ ಈ ಕಾಶ್ಮೀರಿ ಫೈಲ್ಸ್‌ನ ಸತ್ಯ ಗೊತ್ತಿಲ್ಲ. ಪಾಕಿಸ್ತಾನದ ಐಎಸ್ಐನಿಂದ ತರಬೇತಾದ ಮೊದಲ ಬ್ಯಾಚ್‌ನ ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆವತ್ತೇ ಬಂಧಿಸಲಾಗಿತ್ತು. ಆದರೆ ರಾಜಕೀಯ ನಿರ್ಧಾರಗಳಿಂದಾಗಿ ಅವರನ್ನು ಬಿಡುಗಡೆ ಮಾಡಲಾಯಿತು. ಇದೇ ಉಗ್ರಗಾಮಿಗಳು ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕ ಸಂಘಟನೆಗಳ ಮುಂದಾಳುತ್ವ ವಹಿಸಿದರು".
Many people in the country do NOT know this #KashmirFiles fact: first batch of 70 terrorists trained by ISI were arrested by J&K Police but ill-thought political decision had them released & same terrorists later on lead the many terrorist organizations in J&K. #KashmirFilesTruth
— Shesh Paul Vaid (@spvaid) March 16, 2022
ಅದರಲ್ಲಿ ಅವರು ಕೆಲವೊಂದು ಕುಖ್ಯಾತ ಉಗ್ರಗಾಮಿಗಳ ಹೆಸರನ್ನೂ ಬಯಲು ಮಾಡಿದ್ದಾರೆ. ಮೊಹಮದ್ ಅಫ್ಜಲ್ ಶೇಖ್, ರಫೀಕ್ ಅಹ್ಮದ್, ಮೊಹಮದ್ ಅಯೂಬ್ ನಜರ್, ಫಾರೂಕ್ ಅಹ್ಮದ್ ಗನೈ, ಗುಲಾಂ ಮೊಹಮದ್ ಗುಜ್ರಿ, ಫಾರೂಕ್ ಅಹಮದ್ ಇತ್ಯಾದಿ. 1989ರಲ್ಲಿ ಕೇಂದ್ರ ಸರಕಾರದ ಸಹಾಯವಿಲ್ಲದೆ ಈ ಉಗ್ರರ ಬಿಡುಗಡೆ ಸಾಧ್ಯವಿತ್ತೇ? ಎಂದು ಪ್ರಶ್ನಿಸಿದ್ದಾರೆ. ಇದು ನಿಜಕ್ಕೂ ನಿಜವಾದ ಭಾರತೀಯರು ಬೆಚ್ಚಿ ಬೀಳುವ ಸಂಗತಿ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕಾಶ್ಮೀರಿಗಳು, ವಿಶೇಷವಾಗಿ ಯುವ ಜನರು ಭಾರತದ ಗಡಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ, ಭಯೋತ್ಪಾದಕತೆ ಮತ್ತು ಶಸ್ತ್ರಾಸ್ತ್ರದ ತರಬೇತಿ ಪಡೆದು ಬರುತ್ತಿದ್ದಾರೆ ಎಂಬ ಗುಪ್ತಚರ ಇಲಾಖೆಯ ವರದಿಗಳನ್ನು ದಯನೀಯವಾಗಿ ನಿರ್ಲಕ್ಷಿಸಲಾಗಿತ್ತು. ಅದೇ ಅವಧಿಯಲ್ಲಿ ಸಾಕಷ್ಟು ಸರಕಾರಿ ಅಧಿಕಾರಿಗಳ, ವಿಶೇಷವಾಗಿ ಕಾಶ್ಮೀರಿ ಪಂಡಿತರ ಅಪಹರಣವೂ ಆಯಿತು. ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ. ಸ್ಥಳೀಯ ಪತ್ರಿಕೆಗಳಲ್ಲಿ ಬಹಿರಂಗವಾಗಿಯೇ ಬೆದರಿಕೆಗಳನ್ನು ಪ್ರಕಟಿಸಲಾಯಿತು, ಪೋಸ್ಟರ್‌ಗಳನ್ನು ಅಂಟಿಸಲಾಯಿತು, ಹಿಟ್ ಲಿಸ್ಟ್‌ಗಳನ್ನು ಪ್ರಕಟಿಸಲಾಯಿತು. ಆದರೆ, ಅಂದಿನ ಅಧಿಕಾರಸ್ಥರು ನೋಡಿಯೂ ನೋಡದಂತೆ ಸುಮ್ಮನುಳಿದರು. 1990ರ ಏಪ್ರಿಲ್ 20ರಂದು ಅಂದಿನ ರಾಜ್ಯಪಾಲ ಜಗಮೋಹನ್ ಅವರು ಅಂದಿನ ಪ್ರಧಾನಿ ರಾಜೀವ್ ಗಾಂಧಿಗೆ ಇವೆಲ್ಲವನ್ನೂ ಪತ್ರಮುಖೇನ ಸಾದರಪಡಿಸಿದ್ದರು.
ಜಗಮೋಹನ್ ಅವರು ರಾಜೀವ್ ಗಾಂಧಿಗೆ ಬರೆದ ಪತ್ರವೊಂದು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಿರುಗಾಳಿ ಎಬ್ಬಿಸಿದೆ.
ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಕೂಡ ವರದಿ ಪ್ರಕಟಿಸಿದ್ದು, ಅದನ್ನು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಟ್ವೀಟ್ ಮೂಲಕ ತಿಳಿಸಿದ್ದಾರೆ.
Letter to former PM Rajiv Gandhi written by Jagmohan, twice Governor of Jammu and Kashmir, on April 20, 1990. He was a Congress appointee.
— Amit Malviya (@amitmalviya) March 14, 2022
Congress should know their history and how the alerts were ‘wholly ignored’ by the Congress government of the day. https://t.co/bqy0c1ihhD
Letter from Jagmohan to Rajiv Gandhi about Kashmir Situation in 1990 which Rajiv ignored pic.twitter.com/GgSwdIPD64
— Farrago Abdullah (@abdullah_0mar) April 18, 2015
ಅದರಲ್ಲೇನು ಬರೆದಿತ್ತೆಂದರೆ, 1988ರ ಆರಂಭದಿಂದಲೂ ಕಾಶ್ಮೀರದಲ್ಲಿ ಬಿರುಗಾಳಿಯೊಂದು ಏಳಲಿದೆ ಎಂಬ ಕುರಿತು ನಾನು ಎಚ್ಚರಿಕೆ ಸಂದೇಶಗಳನ್ನು ರವಾನಿಸುತ್ತಿದ್ದೆ. ಆದರೆ ನಿಮಗಾಗಲೀ ನಿಮ್ಮ ಸುತ್ತಲಿರುವ ಅಧಿಕಾರಸ್ಥರಿಗಾಗಲೀ, ಇದನ್ನು ನೋಡಲು ವ್ಯವಧಾನವೂ, ಸಮಯವೂ ಇಲ್ಲ, ದೂರದರ್ಶಿತ್ವವೂ ಇಲ್ಲ. ಅವುಗಳು ಎಷ್ಟು ಸ್ಪಷ್ಟ ಮತ್ತು ನೇರವಾಗಿದ್ದವು ಎಂದರೆ, ಅವುಗಳನ್ನು ನಿರ್ಲಕ್ಷಿಸುವುದೆಂದರೆ ಪಾಪ ಮಾಡಿದಂತೆ" ಎಂದು ಒಂದು ಪತ್ರದಲ್ಲಿ ಬರೆದಿದ್ದರು ಜಗಮೋಹನ್. ಹಾಗಂತ, ಜಗಮೋಹನ್ ಅವರನ್ನು ನೇಮಿಸಿದ್ದು ಯಾರೂ ಅಲ್ಲ, ಸ್ವತಃ ಕಾಂಗ್ರೆಸ್ ಸರಕಾರವೇ!
ಅವರ ಆತಂಕ ನಿಜವಾಗಿತ್ತು. ಕಾಶ್ಮೀರದ ಅಲ್ಪಸಂಖ್ಯಾತರು, ಭಾರತದ ಪರವಾಗಿರುವ ಇತರ ಸಮುದಾಯದ ಮಂದಿ - ಎಲ್ಲರೂ ಇದಕ್ಕೆ ತಕ್ಕ ಬೆಲೆ ತೆರಬೇಕಾಯಿತು. ನರಮೇಧ ನಡೆಯಿತು, ಕಾಶ್ಮೀರದಿಂದಲೇ ಓಡಿಹೋಗಬೇಕಾಯಿತು. ಫಾರೂಕ್ ಅಬ್ದುಲ್ಲಾ ಕೂಡ ಲಂಡನ್‌ಗೆ ಪರಾರಿಯಾಗಿಬಿಟ್ಟರು.
ಮೂರು ಪತ್ರಗಳ ಕುರಿತ ಸಮಗ್ರ ವರದಿಯನ್ನು ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದೆ. ಅವಕಾಶವಿದ್ದಾಗ ಓದಲೇಬೇಕಾದದ್ದು ಇದು.
ಐಎಎನ್‌ಎಸ್ ಜೊತೆ ಮಾತನಾಡಿದ್ದ ರಮೇಶ್ ರೈನಾ ಹೇಳುವಂತೆ, ಶೇ.50ರಷ್ಟು ಕಾಶ್ಮೀರಿ ಪಂಡಿತರು ಜನವರಿ 19ರಂದು ರಾಜ್ಯ ತೊರೆದಿದ್ದರು. ಅದೇನೂ ದಿಢೀರ್ ನಡೆದ ಪ್ರಕ್ರಿಯೆಯಲ್ಲ. ಫಾರೂಕ್ ಅಬ್ದುಲ್ಲಾ ಅವರಿಗೆ ಎಲ್ಲವೂ ತಿಳಿದಿದೆ. ಅವರೇ ಇದಕ್ಕೆಲ್ಲ ಉತ್ತರಿಸಬೇಕು!
ಕಾಶ್ಮೀರ ಕಣಿವೆ ಹೊತ್ತಿ ಉರಿಯುತ್ತಿರುವಾಗ ಫಾರೂಕ್ ಅಬ್ದುಲ್ಲಾ ಲಂಡನ್‌ಗೆ ಓಡಿ ಹೋದರು. ಅವರು ಪ್ರತ್ಯೇಕತವಾದಿ ಸಂಸ್ಥೆ ಅಲ್‌ಫತಾ, ಜೆಕೆಎಲ್ಎಫ್‌ನ ಸಂಸ್ಥಾಪಕ ಸದಸ್ಯ. ಅವರು ಮುಖ್ಯಮಂತ್ರಿಯಾಗಿದ್ದಾಗ, ಗಡಿ ನಿಯಂತ್ರಣ ದಾಟಿ ಯುವಕರನ್ನು ಮುಕ್ತವಾಗಿ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿತ್ತು. ಅವರಿಗೆ ತಿಳಿಯದೆ ಇದೆಲ್ಲ ಸಾಧ್ಯ ಹೇಗೆ? ಹೋಗಲಿ, ಪಾಕಿನಲ್ಲಿ ತರಬೇತಾಗಿ ಬಂದು ಸಿಕ್ಕಿಬಿದ್ದ ಉಗ್ರಗಾಮಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ್ದೇಕೆ? ಫಾರೂಕ್ ರಾತೋರಾತ್ರಿ ರಾಜೀನಾಮೆ ನೀಡಿದ್ದೇಕೆ ಮತ್ತು ಮರುದಿನವೇ ಪಂಡಿತರ ವಲಸೆ ಆಗಿದ್ದು ಹೇಗೆ? ಇದೆಲ್ಲವೂ ಪೂರ್ವಯೋಜಿತ. ತನ್ನ ತಲೆಯ ಮೇಲೆ ಬರಬಾರದೆಂಬ ಕಾರಣಕ್ಕೇ ಆತ ರಾಜೀನಾಮೆ ನೀಡಿದರು. ಪಂಡಿತರ ವಲಸೆಯ ಹಿಂದೆ ಷಡ್ಯಂತ್ರವಿತ್ತು ಎಂದಿದ್ದಾರೆ ರಮೇಶ್ ರೈನಾ.
ಮತ್ತೊಂದು ಗಮನಿಸಬೇಕಾದ ಅಂಶವಿದೆ ಇಲ್ಲಿ. ಫಾರೂಕ್ ಅಬ್ದುಲ್ಲಾ ಅವರು ಕಾಶ್ಮೀರದಲ್ಲಿ ಮುಖ್ಯಮಂತ್ರಿ ಪಟ್ಟದಲ್ಲಿ ಮೆರೆಯುತ್ತಿದ್ದಾಗ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದವರು ಇದೇ ಮುಫ್ತಿ ಮೊಹಮ್ಮದ್ ಸಯೀದ್!
ಈ ಕುರಿತು ಗ್ಲೋಬಲ್ ಕಾಶ್ಮೀರಿ ಪಂಡಿತ್ ಡಯಸ್ಪೋರಾ ಸಂಘಟನೆಯ ಮುಖ್ಯಸ್ಥ ಸುರೀಂದರ್ ಕೌಲ್ ಒಂದು ಮಾತು ನೆನಪಿಸಿಕೊಂಡಿದ್ದಾರೆ. 1990ರಲ್ಲಿ ಈ ಸಂಘಟನೆಯು ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಮುಫ್ತಿ ಸಯೀದ್‌ರನ್ನು ಭೇಟಿ ಮಾಡಿದಾಗ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಸ್ಥಳೀಯ ಪೊಲೀಸರು, ಗುಪ್ತಚರ ದಳ ಎಲ್ಲ ದಿಢೀರ್ ಆಗಿ ಮಾಯವಾಯಿತೇಕೆ? ಅವರೇಕೆ ತಮ್ಮ ಕೆಲಸ ಮಾಡುತ್ತಿಲ್ಲ? ಭದ್ರತೆ ಯಾಕಿಲ್ಲ? ಅಂತೆಲ್ಲ ಕೇಳಿದಾಗ, ಅವರಿಂದ ಬಂದ ಉತ್ತರ ಕೇವಲ ಮೌನ. ಆಗಲೇ ರಾಜ್ಯ ಮತ್ತು ದೇಶದ ಆಡಳಿತ ಸೌಧಗಳು ಸಂಪೂರ್ಣವಾಗಿ ಕುಸಿದಿವೆ, ನಮಗಾಗಿ ಯಾರೂ ಇಲ್ಲ ಎಂಬ ಭಾವನೆ ಕಾಡಿತು ಎಂದಿದ್ದಾರವರು.
ಕಾಶ್ಮೀರಿ ಪಂಡಿತರನ್ನು ಹಿಂಸೆ ಕೊಟ್ಟು ಕೊಲ್ಲುವುದು, ಮಹಿಳೆಯರ ಮೇಲೆ ಸರಣಿ ಅತ್ಯಾಚಾರ , ಲೂಟಿ, ಡಕಾಯಿತಿ -ಇವೆಲ್ಲ ಆ ಕಾಲದಲ್ಲಿ ದಿನಚರಿ ಎಂಬಂತೆ ನಡೆಯುತ್ತಿದ್ದಾಗ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಕೂಡ ಏನೂ ಮಾಡಲಿಲ್ಲ. ತಮ್ಮ ಅಧಿಕಾರವನ್ನು ಗಟ್ಟಿ ಮಾಡಿಕೊಳ್ಳಲು ಅವರು ಸಮುದಾಯಗಳನ್ನೇ ಒಡೆದರು. ದೆಹಲಿಯಲ್ಲೊಂದು ರೀತಿಯಲ್ಲಿ, ಕಾಶ್ಮೀರದಲ್ಲಿ ಒಂದು ರೀತಿಯಲ್ಲಿ ಅವರು ಮಾತಾಡುತ್ತಿದ್ದರು ಎಂದು ಕೌಲ್ ವಿವರಿಸಿದ್ದಾರೆ.
ಫಾರೂಕ್ ಅಬ್ದುಲ್ಲಾ ಆ ದಿನಗಳಲ್ಲಿ ದೇಶದ ಪರವಾಗಿ ಕಟ್ಟುನಿಟ್ಟಾದ ನಿರ್ಧಾರ ಕೈಗೊಳ್ಳುತ್ತಿದ್ದರೆ ಕಾಶ್ಮೀರವು ಭಯೋತ್ಪಾದಕರ ಆಡುಂಬೊಲವಾಗುತ್ತಿರಲಿಲ್ಲ ಎಂಬುದು ಕಾಶ್ಮೀರಿ ಪಂಡಿತರ ಬಲವಾದ ವಾದ. ಇದಕ್ಕಾಗಿಯೇ ಅವರೀಗ ಕಾಶ್ಮೀರ ನರಮೇಧದ ಕುರಿತು ನ್ಯಾಯಾಂಗ ಆಯೋಗ ರಚನೆಯಾಗಬೇಕು, ಫಾರೂಕ್ ಅಬ್ದುಲ್ಲಾರನ್ನು ಮೊದಲು ವಿಚಾರಿಸಬೇಕು ಎಂದು ಆಗ್ರಹಿಸುತ್ತಿರುವುದು.
ಇವು ಮುಚ್ಚಿಟ್ಟ ಸತ್ಯಗಳು. ನಾವೆಲ್ಲರೂ ಇಂಥವನ್ನೇ ಕೇಳಿ ಕೇಳಿ ಬದುಕಿದ್ದೇವೆ!
0 ಕಾಮೆಂಟ್‌ಗಳು