ನರೇಂದ್ರ ಮೋದಿ |
ಮೂಲತಃ ಪಾಕಿಸ್ತಾನೀಯರಾಗಿರುವ ಲೇಖಕ ಖಾಲಿದ್ ಉಮರ್, ಸದ್ಯ ಇಂಗ್ಲೆಂಡ್‌ನಲ್ಲಿ ಬ್ಯಾರಿಸ್ಟರ್ ಆಗಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಹೋರಾಡುತ್ತಿರುವ ಅವರು ತಮ್ಮನ್ನು 'ಜಾತ್ಯತೀತ ಮಾನವತಾವಾದಿ' ಎಂದೇ ಕರೆದುಕೊಳ್ಳುತ್ತಾರೆ. ಭಾರತ ಹಾಗೂ ಪಾಕಿಸ್ತಾನದ ಬೆಳವಣಿಗೆಗಳ ಕುರಿತಾಗಿ ಆಗಾಗ್ಗೆ ಬರೆಯುತ್ತಿರುತ್ತಾರೆ. ಅವರು ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿರುವ ವಿಷಯವು ಚಿಂತನೆಗೆ ಹಚ್ಚುವಂತೆ ಮಾಡಿದೆ. ಇಲ್ಲಿದೆ ಅದರ ಪೂರ್ಣಪಾಠ.
ಭಗವದ್ಗೀತೆ ಹೇಳುತ್ತದೆ - ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ! ಈ ನಾಯಕ ಸಾಮಾನ್ಯ ರಾಜಕಾರಣಿಯಲ್ಲ ಅಂತ ಎಲ್ಲ ಸನಾತನಿಗಳೂ ಮನದಟ್ಟು ಮಾಡಿಕೊಳ್ಳಲು ಇದು ಸಕಾಲ. ಈ ನಿಟ್ಟಿನಲ್ಲಿ ನನ್ನ ಅಭಿಪ್ರಾಯ ಇಲ್ಲಿದೆ.
ಅಧಿಕಾರವು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ; ಪೂರ್ಣಾಧಿಕಾರವು ಸಂಪೂರ್ಣವಾಗಿ ಭ್ರಷ್ಟವಾಗಿರುತ್ತದೆ ಅಂತ ಅವರೆಲ್ಲ ಹೇಳುತ್ತಾರೆ. ಈ ಅಧಿಕಾರದ ರಾಜಕಾರಣಕ್ಕೇರಿದ ಜಗತ್ತಿನ ಪ್ರಜಾಪ್ರಭುತ್ವದ ಯಾವುದೇ ನಾಯಕನೂ ನೈತಿಕ ಮೌಲ್ಯಗಳನ್ನು, ನೀತಿಯ ಮಾನದಂಡಗಳನ್ನು ಪ್ರಚುರಪಡಿಸಿದ ಇತಿಹಾಸವೇ ಇಲ್ಲ. ಭಾರತದಲ್ಲಿ ರಾಜಕೀಯ ಮುಖಂಡನೊಬ್ಬ 2 ದಶಕಕ್ಕೂ ಹೆಚ್ಚು ಅವಧಿಯಲ್ಲಿ ನಿಷ್ಕಳಂಕವಾದ ದಾಖಲೆಯನ್ನು ಕಾಪಾಡಿಕೊಂಡು ಬಂದಿರುವುದು ಪವಾಡಕ್ಕಿಂತ ಸಣ್ಣ ಸಂಗತಿಯೇನಲ್ಲ. ಆತ 2001ರಿಂದಲೂ ಅಧಿಕಾರದಲ್ಲಿದ್ದಾರೆ, ಮೊದಲು ಗುಜರಾತ್ ಮುಖ್ಯಮಂತ್ರಿಯಾಗಿ 12 ವರ್ಷ, 277 ದಿನ ಮತ್ತು 2022 ಮೇ 26ರಂದು ಭಾರತದ ಪ್ರಧಾನ ಮಂತ್ರಿಯಾಗಿ 8 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ನಿಮಗೆ ಅವರ ರಾಜಕಾರಣವನ್ನು ಒಪ್ಪದಿರಬಹುದು, ಆದರೆ ಅವರಿಗೆ ಎಳ್ಳಷ್ಟೂ ಭ್ರಷ್ಟಾಚಾರದ ಕಳಂಕ ಹಚ್ಚುವುದು ಸಾಧ್ಯವಾಗದು. ತಾಯ್ನಾಡಿನ ಸೇವಕನಾಗಿ ಆತನ ಸ್ಫಟಿಕಸ್ವಚ್ಛ ಗುಣಕ್ಕೆ ಮತ್ತೊಂದು ಸಾಕ್ಷಿ ಬೇಕೇ?
ರಾಜಕೀಯ ಕಚೇರಿಯೊಂದು ಭಗವಂತ ಮತ್ತು ಅರ್ಹರ ಸೇವೆಯ ಪವಾಡವಾಗಿ ಹೇಗೆ ಪರಿವರ್ತನೆಗೊಳ್ಳಬಹುದು ಎಂಬುದನ್ನು ಜಗತ್ತಿನ ಮುಖಂಡರು ಮೋದೀಜಿ ಅವರಿಂದ ಕಲಿಯಬೇಕು. ಕೆಟ್ಟವರು, ಸುಳ್ಳರು, ಭ್ರಷ್ಟರು, ಜಾತಿವಾದಿಗಳು, ವಂಚಕರು, ನಂಬಿಕೆದ್ರೋಹಿಗಳು, ಮೋಸಗಾರರಿಂದಲೇ ತುಂಬಿರುವ ಕ್ಷೇತ್ರವೊಂದರಲ್ಲಿ ನಿಷ್ಕಳಂಕವಾಗಿ ಇರುವುದು ಹೇಗೆ ಎಂಬುದನ್ನು ಒಬ್ಬ ಧಾರ್ಮಿಕ ಮುಖಂಡನು ಜಗತ್ತಿಗೆ ತೋರಿಸುತ್ತಿದ್ದಾರೆ. "ರಾಜಕಾರಣಿಗಳೆಲ್ಲ ಒಂದೇ. ನದಿಯೇ ಇಲ್ಲದಿದ್ದರೂ ಅಲ್ಲೊಂದು ಸೇತುವೆ ಕಟ್ಟುವ ಆಶ್ವಾಸನೆ ನೀಡುತ್ತಾರವರು" ಅಂತ ನಿಕಿತ ಖ್ರುಶ್ಚೆವ್ ಹೇಳಿದ್ದಾರೆ. ಹೌದು, ನರೇಂದ್ರ ಮೋದಿ ಅವರು ಜಾಗತಿಕ ರಂಗಕ್ಕೆ ಬರುವವರೆಗೂ ಅವರು ಹೇಳಿದ್ದು ಸರಿಯಾಗಿತ್ತು.
ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಬಹುತೇಕ ಎಲ್ಲ ಮುಖಂಡರೂ ತಾವೊಂದು ಧರ್ಮ ಅಥವಾ ಇಸಂಗಳಿಗೆ ಸೇರಿದ್ದೇವೆ ಅಂತ ತೋರಿಸಿಕೊಳ್ಳಲು ಹವಣಿಸುತ್ತಾರೆ. ವಿಭಿನ್ನ ನಂಬಿಕೆಗಳಿಂದಾಗಿ ಅಥವಾ ನಂಬಿಕೆಯೇ ಇಲ್ಲದಿರುವರಿಂದಾಗಿ ಮುಖಂಡರು ಈ ರೀತಿಯ ಪ್ರೇರಣೆ ಪಡೆಯುತ್ತಿದ್ದುದನ್ನು ಜಗತ್ತೇ ಕಂಡಿದೆ. ಅದು ಇಸ್ಲಾಂ ಇರಲಿ, ಕ್ರೈಸ್ತ, ಜುಡಾಯಿಸಂ, ಬೌದ್ಧ, ಸಮಾಜವಾದಿ, ಕಮ್ಯೂನಿಸಂ, ಫ್ಯಾಸಿಸಂ, ನಾಜಿಸಂ ಅಥವಾ ನಾಸ್ತಿಕರೇ ಆಗಿರಲಿ, ಮೋದೀಜಿಯವರು ಜಗತ್ತಿಗೆ ತೋರಿಸಿದ ನೈತಿಕ ಮೌಲ್ಯಗಳ ಹತ್ತಿರಕ್ಕೂ ಯಾರಿಗೂ ಬರಲಾಗಲಿಲ್ಲ. ಸನಾತನ ಧರ್ಮದ ತತ್ವ ಸಿದ್ಧಾಂತಗಳ ಆಧಾರದಲ್ಲಿ ರಾಜ್ಯಭಾರ ಮಾಡಿದಲ್ಲಿ ಜಗತ್ತು ಎಷ್ಟು ಶಾಂತಿಯುತವಾಗಿರಬಹುದು ಎಂಬುದನ್ನು ಅದು ತೋರಿಸುತ್ತದೆ.
ಸನಾತನಿಗಳು ಜಗತ್ತೇ ತಮ್ಮ ಕುಟುಂಬ ಎನ್ನುವವರು (ವಸುಧೈವ ಕುಟುಂಬಕಂ) ಮತ್ತು ಮಾನವೀಯತೆಗೆ ತುಡಿಯುವವರು. ಇತಿಹಾಸಕ್ಕೆ ಮರಳಿ ಹೋಗಿ ನೋಡಿ ಮತ್ತು ಬೇರೆ ಮತಗಳ ಕುರಿತು ಸನಾತನಿಗಳು ತೋರಿದ ಆದರವನ್ನೊಮ್ಮೆ ಅವಲೋಕಿಸಿ. ಕಚ್ಚಾ ಧಾರ್ಮಿಕ ನಂಬಿಕೆಗಳ ಕೆಟ್ಟ ರಾಜಕಾರಣದಿಂದಾಗಿ ಗಬ್ಬೆದ್ದು ಹೋಗಿದ್ದ, ಜಗತ್ತಿನ ಅತ್ಯಂತ ಪುರಾತನ ನಾಗರಿಕತೆಯ ಪರಂಪರೆಯ ರಕ್ಷಕನಾಗಿ ಮೋದೀಜಿ ಬಂದಿದ್ದಾರೆ.
ಈ ಮಹಾನ್ ವ್ಯಕ್ತಿ, ನರೇಂದ್ರ ಮೋದಿಯ ಕೆಲಸ ಕಾರ್ಯಗಳನ್ನು ಗುರುತಿಸುವ ಭಾರತೀಯರು ಕೊನೆಗೂ ಪರಸ್ಪರ ಒಂದಾಗುತ್ತಿದ್ದಾರೆ.
-ಖಾಲಿದ್ ಉಮರ್
ಇದನ್ನೂ ಓದಿ: ಹಿಂದುತ್ವ ಮತ್ತು ಇಸ್ಲಾಂ ಧರ್ಮ ಅನುಯಾಯಿಯಾದ ಭಾರತ-ಪಾಕಿಸ್ತಾನಗಳ ಗತಿ ಮತ್ತು ಸ್ಥಿತಿ
0 ಕಾಮೆಂಟ್‌ಗಳು